ಮೂರು ಕಾರುಗಳನ್ನ ಖರೀದಿಸಿದ್ದಾರೆ ನಟ ರಾಕಿಂಗ್ ಸ್ಟಾರ್ ಯಶ್ | FIlmibeat Kannada

2017-12-07 7

ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಾಂಪತ್ಯ ಜೀವನಕ್ಕೆ ಡಿಸೆಂಬರ್ 9 ನೇ ತಾರೀಖಿಗೆ ಒಂದು‌ ವರ್ಷ ತುಂಬಲಿದೆ. ಇದೇ ಸಂಭ್ರಮದಲ್ಲಿ‌ ಯಶ್ ತಮ್ಮ ಮನೆಯವರಿಗೆ ಉಡುಗೊರೆ ನೀಡಿದ್ದಾರೆ. ಸಾಮಾನ್ಯವಾಗಿ ಮದುವೆ ವಾರ್ಷಿಕೋತ್ಸವಗಳಲ್ಲಿ ಗಂಡ-ಹೆಂಡತಿ ಇಬ್ಬರು ಸೇರಿ ಆಚರಣೆ ಮಾಡೋದು ಕಾಮನ್, ಆದರೆ ಯಶ್ ತಾವು ಎಲ್ಲರಿಗಿಂತಲೂ ಭಿನ್ನ ಅನ್ನೋದನ್ನ ನಿರೂಪಿಸಿದ್ದಾರೆ. ಯಶ್ ಮದುವೆಯ ಮೊದಲ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಮೂರು ಕಾರುಗಳನ್ನ ಖರೀದಿ ಮಾಡಿದ್ದಾರೆ. ಪ್ರೀತಿಯಲ್ಲಿ ಎಲ್ಲರಿಗೂ ಸಮಪಾಲು ಅನ್ನೋ ರೀತಿಯಲ್ಲಿ ಒಂದು ತನಗಾಗಿ ಮತ್ತೊಂದು‌ ಪತ್ನಿ ರಾಧಿಕಾ‌ಪಂಡಿತ್ ಗಾಗಿ ಇನ್ನೊಂದು ಕಾರನ್ನ ತಮ್ಮ ತಂದೆ-ತಾಯಿಗಾಗಿ ಕೊಂಡುಕೊಂಡಿದ್ದಾರೆ.ಯಶ್ ''Mercedes Benz'' ನ ಮೂರು ಬೇರೆ ಬೇರೆ ಮಾಡೆಲ್ ನ‌ ಕಾರುಗಳನ್ನ ಖರೀದಿ ಮಾಡಿದ್ದಾರೆ. ಅಪ್ಪ-ಅಮ್ಮನಿಗೆ ಬೆಂಜ್ (''Mercedes Benz'' ) E-Class , ಪತ್ನಿ ರಾಧಿಕಾ ಪಂಡಿತ್ ಗೆ‌ ಬೆಂಜ್ (''Mercedes Benz'' ) GLS ಕಾರನ್ನ ಉಡುಗೊರೆಯಾಗಿ ನೀಡಿದ್ದಾರೆ.

Videos similaires